ನಿಮ್ಮ ಜೀವನದಲ್ಲೂ ಈ ಬದಲಾವಣೆಗಳಾಗಿದ್ದರೆ ಅದಕ್ಕೆ ರಾಹು ಕಾರಣವಾಗಿರಬಹುದು..!

ಕುಂಡಲಿಯಲ್ಲಿ ರಾಹುವಿನ ಸ್ಥಾನವು ಬಹಳ ಮುಖ್ಯವಾಗಿರುತ್ತದೆ. ರಾಹು ಉಚ್ಛ ಸ್ಥಾನದಲ್ಲಿದ್ದರೆ, ಎಲ್ಲವೂ ಶುಭವಾಗುತ್ತದೆ. ವ್ಯಕ್ತಿಯ ಮನಸ್ಸಿನಲ್ಲಿ ಒಳ್ಳೆಯ ಆಲೋಚನೆಗಳು ಬರುತ್ತವೆ. ಜೀವನದಲ್ಲಿ ಸಕಾರಾತ್ಮಕತೆ ತುಂಬಿರುತ್ತದೆ. 

Written by - Ranjitha R K | Last Updated : Jul 28, 2021, 08:19 PM IST
  • ರಾಹು ನೀಚ ಸ್ಥಿತಿಯಲ್ಲಿದ್ದರೆ, ಜೀವನದಲ್ಲಿ ಅಶುಭ ಫಲವೇ ಗೋಚರಿಸುತ್ತದೆ
  • ರಾಹುವಿನ ಅಶುಭ ಫಲಗಳಿಗೆ ಕಾರಣಗಳೇನು ತಿಳಿಯಿರಿ
  • ನಿಮ್ಮ ಜೀವನದಲ್ಲೂ ಈ ಬದಲಾವಣೆಗಲಾಗುತ್ತಿದ್ದರೆ ಒಮ್ಮೆ ಪರಿಶೀಲಿಸಿಕೊಳ್ಳಿ
 ನಿಮ್ಮ ಜೀವನದಲ್ಲೂ ಈ ಬದಲಾವಣೆಗಳಾಗಿದ್ದರೆ ಅದಕ್ಕೆ ರಾಹು ಕಾರಣವಾಗಿರಬಹುದು..! title=
ರಾಹು ನೀಚ ಸ್ಥಿತಿಯಲ್ಲಿದ್ದರೆ, ಜೀವನದಲ್ಲಿ ಅಶುಭ ಫಲವೇ ಗೋಚರಿಸುತ್ತದೆ (photo zee news)

ನವದೆಹಲಿ : ಕುಂಡಲಿಯಲ್ಲಿ ರಾಹುವಿನ  (Rahu) ಸ್ಥಾನವು ಬಹಳ ಮುಖ್ಯವಾಗಿರುತ್ತದೆ. ರಾಹು ಉಚ್ಛ ಸ್ಥಾನದಲ್ಲಿದ್ದರೆ, ಎಲ್ಲವೂ ಶುಭವಾಗುತ್ತದೆ. ವ್ಯಕ್ತಿಯ ಮನಸ್ಸಿನಲ್ಲಿ ಒಳ್ಳೆಯ ಆಲೋಚನೆಗಳು ಬರುತ್ತವೆ. ಜೀವನದಲ್ಲಿ ಸಕಾರಾತ್ಮಕತೆ ತುಂಬಿರುತ್ತದೆ. ಎಲ್ಲಾ ಕಾರ್ಯಗಳಲ್ಲೂ ಯಶಸ್ಸು ಸಿಗುತ್ತದೆ. ಮತ್ತೊಂದೆಡೆ, ಜಾತಕದಲ್ಲಿ ರಾಹು ನೀಚ ಸ್ಥಾನದಲ್ಲಿದ್ದರೆ (Rahu position in Jathaka) ಜೀವನದಲ್ಲಿ ನಕಾರಾತ್ಮಕತೆಯೇ ತುಂಬಿರುತ್ತದೆ. ದೈಹಿಕ ಮಾನಸಿಕ ಸಮಸ್ಯೆಗಳು ಜೀವನದಲ್ಲಿ ತಾಂಡವವಾಡುತ್ತದೆ.  ಯಾವ ಕೆಲಸ ಮಾಡಿದರೂ ವೈಫಲ್ಯವಿವೇ ಕಾಣುತ್ತದೆ. ಆದರೆ ಅನೇಕ ಸಲ, ಜಾತಕದಲ್ಲಿ ರಾಹು ಸ್ಥಾನ ಉತ್ತಮವಾಗಿದ್ದರೂ ಶುಭ ಪರಿಣಾಮಗಳು ಸಿಗುವುದೇ ಇಲ್ಲ. ಇದಕ್ಕೂ ಕಾರಣಳಿವೆ. 

ರಾಹುವಿನ ಅಶುಭ ಫಲಗಳಿಗೆ ಕಾರಣಗಳಿವು : 
-ಮನೆಯ ಹೊಸ್ತಿಲು ಹಾಳಾಗಿದ್ದರೆ ಅಥವಾ ಮೆಟ್ಟಿಲುಗಳನ್ನು ತಪ್ಪಾಗಿ ನಿರ್ಮಿಸಿದ್ದರೆ ಅಥವಾ ಮೆಟ್ಟಿಲುಗಳು ಹಾನಿಗೊಳಗಾಗಿದ್ದರೆ, ಸಮಸ್ಯೆಗಳು ಎದುರಾಗುತ್ತಿರುತ್ತದೆ. ಜಾತಕದಲ್ಲಿ  ರಾಹು ಉತ್ತಮ ಸ್ಥಾನದಲ್ಲಿದ್ದರೂ ವ್ಯಕ್ತಿಯ ಜೀವನದಲ್ಲಿ ಅಶುಭ ಫಲವೇ ಸಿಗುತ್ತಿರುತ್ತದೆ.  
ಇದನ್ನೂ ಓದಿ: 
-ಮನೆಯ ಶೌಚಾಲಯ (toilet), ಸ್ನಾನಗೃಹಗಳನ್ನು ಕೂಡಾ ಯಾವತ್ತೂ ಗಲೀಜು ಮಾಡಿ ಇಡಬೇಡಿ. ಇಲ್ಲಿ ಸ್ವಚ್ಛತೆಯನ್ನು ಕಾಪಾಡುವುದು ಬಹಳ ಮುಖ್ಯ. ಹೀಗಾಗದೆ ಇದ್ದಲ್ಲಿ ರಾಹು ಜೀವನದಲ್ಲಿ ಅಶುಭ ಫಲ ನೀಡುತ್ತಾನೆ.
-ಮನೆಯ ನೈಋತ್ಯ ಮೂಲೆಯಲ್ಲಿ ಕೊಳಕು ಇದ್ದರೆ ಕೂಡಾ ರಾಹು ಅಶುಭ ಫಲ ನೀಡುತ್ತಾನೆಯಂತೆ. ಅಲ್ಲದೆ, ಹೊಟ್ಟೆಯ ಮೇಲೆ ಮಲಗುವ ಅಭ್ಯಾಸವಿದ್ದರೂ ಅಣದರೆ ಬೋರಲು ಮಲಗುವ ಅಭ್ಯಾಸವಿದ್ದರೂ ಅದನ್ನು ತಕ್ಷಣ ಬಿಟ್ಟು ಬಿಡಿ. ಇದರಿಂದ ಜೀವನದಲ್ಲಿ ಅಶುಭ ಫಲವನ್ನು ಎದುರಿಸಬೇಕಾಗುತ್ತದೆ. 
-ರಾಹು (Rahu)ಇರುವ ಸ್ಥಳದಲ್ಲಿ ವಾಸಿಸುವುದು ಕೂಡಾ ಇದಕ್ಕೆ ಕಾರಣವಾಗಿರಬಹುದು. ಅಂದರೆ, ಮದ್ಯ ಮಾರಾಟ ಮಾಡುವ ಸ್ಥಳ, ಮಟನ್-ಚಿಕನ್ ಮಾರಾಟವಾಗುವ ಸ್ಥಳದ ಬಳಿ ವಾಸಿಸುವುದರಿಂದ ಜೀವನದಲ್ಲಿ ಶುಭ ಫಲ ದೂರವಾಗಬಹುದು.

ಇದನ್ನೂ ಓದಿ: Tuesday Remedy: ಮಂಗಳವಾರ ಈ ವಸ್ತುಗಳ ಖರೀದಿ ಮನೆಯಲ್ಲಿ ಬಡತನ, ಅಶಾಂತಿ, ಅನಾರೋಗ್ಯಕ್ಕೆ ಕಾರಣವಾಗುತ್ತಂತೆ!

ರಾಹುವಿನ ಅಶುಭ ಫಲದ ಸಂಕೇತಗಳು :

ರಾಹು ವ್ಯಕ್ತಿಯ ಜೀವನದಲ್ಲಿ ಕೆಟ್ಟ ಪರಿಣಾಮವನ್ನು ಬೀರಲು ಪ್ರಾರಂಭಿಸಿದರೆ, ಅದರ ಸಂಕೇತಗಳು ಕಾಣಲು ಆರಂಭಿಸುತ್ತದೆ. ಒಬ್ಬ ವ್ಯಕ್ತಿಯು ಸದಾ ಹಿಂದಿನ ವಿಷಯಗಳನ್ನು ನೆನಪಿಸಿಕೊಂಡು  ದುಃಖಿಸುತ್ತಲೇ ಇರುವುದು. ಭವಿಷ್ಯದ ಕಲ್ಪನೆಗಳಲ್ಲಿ ಕಳೆದುಕೊಳ್ಳುವುದು ಇದು ರಾಹುವಿನ ಅಶುಭ ಫಲದ ಕಾರಣವೇ ಆಗುತ್ತದೆ. 
-ವ್ಯಕ್ತಿ ಅನಗತ್ಯವಾಗಿ ಭಯ ಮತ್ತು ಆತಂಕಗಳಲ್ಲಿ ಬದುಕಲು ಪ್ರಾರಂಭಿಸುತ್ತಾನೆ.
-ಬ್ಲ್ಯಾಕ್ ಮ್ಯಾಜಿಕ್ (Black magic), ತಂತ್ರ-ಮಂತ್ರಗಳನ್ನು ನಂಬಲು ಪ್ರಾರಂಭಿಸುತ್ತಾನೆ. 
- ನೀರು (Water), ಬೆಂಕಿ ಮತ್ತು ಎತ್ತರಗಳ ಪ್ರದೇಶಗಳಿಂದ ಭಯ ಪಡಲು ಆರಂಭಿಸುತ್ತಾನೆ. 
- ರಾತ್ರಿ ಸರಿಯಾಗಿ ನಿದ್ದೆ ಬರುವುದಿಲ್ಲ, ಮಲಗಿದ ವೇಳೆ ಕನಸು ಬೀಳಲು ಶುರುವಾಗುತ್ತದೆ. 
- ಯಾವ ನಿರ್ಧಾರಗಳ ಬಗ್ಗೆಯೂ ಖಚಿತವಾಗಿರುವುಲ್ಲ. 
-ಮನೆಯಲ್ಲಿ ಆಗಾಗ ಜಗಳ ಆಗುತ್ತಲೇ ಇರುತ್ತದೆ. ಅಪಘಾತಗಳು ಹೆಚ್ಚಾಗುತ್ತವೆ. ಕೆಟ್ಟ ಅಭ್ಯಾಸಗಳ ದಾಸರಾಗುತ್ತಾರೆ.  

ಇದನ್ನೂ ಓದಿ: Zodiac Signs: ಈ ರಾಶಿಯವರ ಮೇಲೆ ಈಶ್ವರನ ಸಂಪೂರ್ಣ ಆಶೀರ್ವಾದವಿರುತ್ತದೆ , ಪ್ರತಿ ಕೆಲಸದಲ್ಲಿಯೂ ಸಿಗುತ್ತದೆ ಯಶಸ್ಸು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News